img
ಶಾಂತಿ
ಶಾಂತಿ
ಬರಗೂರು ರಾಮಚಂದ್ರಪ್ಪ
image
ಶಾಂತಿ
ಶಾಂತಿ
ಬರಗೂರು ರಾಮಚಂದ್ರಪ್ಪ
Country
INDIA
language
KANNADA
2005 year
105 Minutes

Synopsis

ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಪ್ರಯೋಗವಾಗಿ ಗಮನ ಸೆಳೆದ ಚಿತ್ರ. ಇಡೀ ಚಿತ್ರ ಏಕಪಾತ್ರದ ಮೂಲಕವೇ ಸಾಗುತ್ತದೆ. ಶಾಂತಿ ಕಲಾವಿದೆಕ. ವಿಶ್ವ ಶಾಂತಿ ಸಮ್ಮೇಳನದ ಲೋಗೋ ರಚಿಸಲು ಅಂತಾರಾಷ್ಟೀಯ ಶಾಂತಿ ಸಮಿತಿ ಇವರನ್ನು ಆಯ್ಕೆ ಮಾಡುತ್ತದೆ. ಚಿತ್ರ ರಚನೆಗೆ ಸ್ಪೂರ್ತಿ ಪಡೆಯಲು ಶಾಂತಿ ಗಿರಿಶ್ರೇಣಿಗಳಿರುವ ಪ್ರದೇಶದಲ್ಲಿ ಸಂಚರಿಸುತ್ತಾಳೆ. ಅಲ್ಲಿ ಅವಳು ಭಯೋತ್ಪಾದಕರ ಬಲೆಗೆ ಬೀಳುತ್ತಾಳೆ. ಶಾಂತಿಯನ್ನು ಅಪಹರಿಸುವ ಭಯೋತ್ಪಾದಕರು, ಅವರನ್ನು ಅವಳ ಸಹಾಯಕರನ್ನಾಗಿ ವಿಶ್ವ ಸಮ್ಮೇಳನಕ್ಕೆ ಕರೆದುಕೊಂಡು ಹೋಗುವಂತೆ ಒತ್ತಾಯಿಸುತ್ತಾರೆ. ಸಮ್ಮೇಳನ ಆವರಣವನ್ನು ಸ್ಫೋಟಿಸುವುದು ಅವರ ಸಂಚು. ಇಲ್ಲಿ ಶಾಂತಿ ಮತ್ತು ಸಮರ ಆರಂಭವಾಗುತ್ತದೆ. ಶಾಂತಿ ಕದಡಿದೆ. ಈ ಬಲೆಯಿಂದ ಶಾಂತಿ ಹೇಗೆ ಹೊರಬರುತ್ತಾಳೆ..

Producer(s) or Production Company: ರಮೇಶ್ ಯಾದವ್ ಮೂವೀಸ್
Screenplay: ಬರಗೂರು ರಾಮಚಂದ್ರಪ್ಪ
Director of Photography: ನಾಗರಾಜ್‌ ಆದವಾನಿ
Editor: ಸುರೇಶ ಅರಸ್
Music: ಹಂಸಲೇಖ
Sound: NA
Cast: ಭಾವನ

Awards - Winner: NA
Awards - Nominations | Screened | Official Selection: NA

Director's Biography
img
ಬರಗೂರು ರಾಮಚಂದ್ರಪ್ಪ

ಬರಗೂರು ರಾಮಚಂದ್ರಪ್ಪ : ಕನ್ನಡ ಸಾಹಿತಿಯಾಗಿ, ಚಿಂತಕರಾಗಿ ಜನಪ್ರಿಯ. ಕಾದಂಬರಿಕಾರರಾಗಿ, ಕತೆ, ಕವನ, ನಾಟಕಗಳನ್ನು ರಚಿಸಿದ್ದಾರೆ, ಬಂಡಾಯ ಸಾಹಿತ್ಯ ಸಂಘಟನೆಯ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಲೋಕವನ್ನು ಕಟ್ಟಿದ್ದಾರೆ. ೨೩ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. “ತಾಯಿ” ಚಿತ್ರಕ್ಕೆ ರಾಷ್ಟ್ರಪ್ರಶಸಿಯೂ ದೊರಕಿದೆ. ಅತ್ಯುತ್ತಮ ಗೀತ ರಚನೆಗಾಗಿ ರಾಷ್ಟ್ರೀಯ ಅತ್ಯುತ್ತಮ ಗೀತರಚನಕಾರ ಪ್ರಶಸ್ತಿಯನ್ನೂ ಪಡೆದಿದ್ದಾರೆ ಪಂಪ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.