img
ಚಿಗುರಿದ ಕನಸು
ಚಿಗುರಿದ ಕನಸು
image
ಚಿಗುರಿದ ಕನಸು
ಚಿಗುರಿದ ಕನಸು
Country
INDIA
language
KANNADA
2003 year
154 Minutes

Synopsis

ಕ.ಸಾ: ಎಲೆಕ್ಟ್ರಿಕಲ್‌ ಇಂಜಿನಿಯರ್‌ ಆಗಿರುವ ಯುವಕನ ಕತೆ. ನಗರ ಜೀವನಕ್ಕಿಂತ ಹಳ್ಳಿಯ ವಾತಾವರಣವೇ ಅವನಿಗೆ ಬಹಳ ಇಷ್ಟ. ಬರಡು ಭೂಮಿಯೊಂದನ್ನು ಕೊಂಡುಕೊಂಡು ಅಲ್ಲಿ ಹಸಿರು ನಳನಳಿಸುವಂತೆ ಮಾಡುತ್ತಾನೆ. ತನ್ನದೇ ಕೃಷಿ ಸಂಬಂಧಿಸಿದ ಆವಿಷ್ಕಾರಗಳ ಮೂಲಕ ಕೃಷಿಯಲ್ಲಿ ಹೊಸಹೊಸ ಸಾಹಸಗಳನ್ನು ಮಾಡುತ್ತಾನೆ. ಶಿವರಾಮ ಕಾರಂತರ ಕಾದಂಬರಿ ಆಧರಿಸಿದ ಚಿತ್ರ.

Producer(s) or Production Company: ಪಾರ್ವತಮ್ಮ ರಾಜಕುಮಾರ್
Screenplay: ಜಯಂತ್ ಕೈಕಿಣಿ , ಟಿ . ಎಸ್ . ನಾಗಾಭರಣ
Director of Photography: ಬಿ . ಸಿ . ಗೌರಿಶಂಕರ್
Editor: ಎಸ್ . ಮನೋಹರ್
Music: ವಿ . ಮನೋಹರ್
Sound: NA
Cast: ತಾರಾಗಣ: ರಾಜಕುಮಾರ್ , ಅನಂತ್ ನಾಗ್, ಅವಿನಾಶ್ , ವಿದ್ಯಾ ವೆಂಕಟೇಶ್ , ರೇಖಾ ಉನ್ನಿಕೃಷ್ಣನ್

Awards - Winner: NA
Awards - Nominations | Screened | Official Selection: NA

Director's Biography
img

ಟಿ.ಎಸ್.ನಾಗಾಭರಣ : ಕನ್ನಡದಲ್ಲಿ ಹೆಸರಾಂತ ನಿರ್ದೇಶಕರು. ರಂಗಭೂಮಿಯಲ್ಲೂ ಜನಪ್ರಿಯ. ೨೬ ವರ್ಷಗಳ ಸಿನಿಮಾ ವೃತ್ತಿಯಲ್ಲಿ ಮೂವತ್ತು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎಂಟು ರಾಷ್ಟ್ರೀಯ ಪ್ರಶಸ್ತಿ ಹಾಗೂ ೧೪ ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೊಸ ಅಲೆ ಚಲನಚಿತ್ರಗಳಲ್ಲದೆ, ಕಮರ್ಷಿಯಲ್‌ ಸಿನಿಮಾಗಳಲ್ಲೂ ಅತ್ಯಂತ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ, ಜನುಮದ ಜೋಡಿ, ನಾಗಮಂಡಲ, ಚಿನ್ನಾರಿ ಮುತ್ತ ಅತ್ಯಂತ ಯಶಸ್ಸು ಪಡೆದ ಚಿತ್ರಗಳಾಗಿವೆ. ನಾಗಮಂಡಲ ೧೯೯೮ ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. ಮೂರು ಮಕ್ಕಳ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದ “ನಾವಿದ್ದೇವೆ ಎಚ್ಚರಿಕೆ” ಚಿತ್ರಕ್ಕೆ ರಾಜ್ಯ ಸರ್ಕಾರದ ಪ್ರಶಸ್ತಿ ಬಂದಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದೆ. ನಾಗಾಭರಣ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.