img
ಅಮೃತಧಾರೆ
ಅಮೃತಧಾರೆ
ನಾಗತಿಹಳ್ಳಿ ಚಂದ್ರಶೇಖರ್
image
ಅಮೃತಧಾರೆ
ಅಮೃತಧಾರೆ
ನಾಗತಿಹಳ್ಳಿ ಚಂದ್ರಶೇಖರ್
Country
INDIA
language
KANNADA
2005 year
144 Minutes

Synopsis

ಕ.ಸಾ: ಪುರು ಮತ್ತು ಅಮೃತ ದಂಪತಿಯಾದರೂ, ಪ್ರೇಮಿಗಳ ಹಾಗೆ ಇದ್ದಾರೆ. ಅಷ್ಟೊಂದು ಪ್ರೀತಿ ಅವರಿಬ್ಬರ ಮಧ್ಯೆ ಇದ್ದರೂ ಆಗಾಗ ಜಗಳವಾಡುವುದು ವಾಡಿಕೆ. ಕುಟುಂಬ ಬೆಳೆಸಲು ಮಗು ಬೇಕು ಎನ್ನುವುದು ಅಮೃತಳ ವಾದವಾದರೆ, ಮನೆಕಟ್ಟಬೇಕು ಎನ್ನುವುದು ಪುರುವಿನ ವಾದ. ಹೀಗೆ ನಿತ್ಯ ಸಂಸಾರದ ಜಂಜಾಟದಲ್ಲಿ ಅವರಿಬ್ಬರೂ ಸಂಸಾರ ತೂಗಿಸಲು ಪರದಾಡುತ್ತಿದ್ದಾರೆ. ಮ‍ಧ್ಯಮವರ್ಗದ ಸಂಸಾರದ ಜಂಜಾಟವನ್ನು ಚಿತ್ರ ಕಟ್ಟಿಕೊಡುತ್ತದೆ.

Producer(s) or Production Company: ನಾಗತಿಹಳ್ಳಿ ಚಂದ್ರಶೇಖರ್
Screenplay: ನಾಗತಿಹಳ್ಳಿ ಚಂದ್ರಶೇಖರ್
Director of Photography: ಕೃಷ್ಣಕುಮಾರ್
Editor: ಬಿ .ಎಸ್ . ಕೆಂಪರಾಜು
Music: ಮನೋ ಮೂರ್ತಿ
Sound: NA
Cast: ತಾರಾಗಣ: ಧ್ಯಾನ್ , ರಮ್ಯಾ, ಅಮೀತ ಬಚ್ಚನ್

Awards - Winner: ನಾಗತೀಹಳ್ಳಿ ಚಂದ್ರಶೇಖರ್:‌ ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗತೀಹಳ್ಲಿಯಲ್ಲಿ ಜನಿಸಿದ ಚಂದ್ರಶೇಖರ್‌, ಅವರಿಗೆ ಬಾಲ್ಯದಿಂದಲೂ ಕನ್ನಡಸಾಹಿತ್ಯದ ಬಗ್ಗೆ ಒಲವು. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ನಿರ್ಮಾಪಕ, ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ೧೯೮೬ ರಲ್ಲಿ “ಕಾಡಿನ ಬೆಂಕಿ” ಎನ್ನುವ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ಚಿತ್ರ ಪಯಣ ಆರಂಭಿಸಿದ ನಾಗತೀಹಳ್ಳಿ, ಆ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಅಮೆರಿಕ ಅಮೆರಿಕ ಅವರ ನಿರ್ದೇಶನದ ಜನಪ್ರಿಯ ಚಿತ್ರ. ೧೫ ಕಥಾ ಚಿತ್ರಗಳನ್ನು, ೧೦ ಟೆಲಿ ಸೀರಿಸ್‌ ಗಳನ್ನು ನಿರ್ದೇಶಿಸಿದ್ದಾರೆ. ಕಾದಂಬರಿಕಾರರೂ ಆಗಿರುವ ನಾಗತೀಹಳ್ಳಿ ಚಂದ್ರಶೇಖರ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ.
Awards - Nominations | Screened | Official Selection: NA